ಕೋಲಾರನ್ಯೂಸ್

ಜಮಾತ್ ಆಲಿ ಇಸ್ಲಾಂ ಮಸೀದಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 21 ನಿದೇರ್ಶಕರ ಆಯ್ಕೆ.

ಜಮಾತ್ ಆಲಿ ಇಸ್ಲಾಂ ಮಸೀದಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 21 ನಿದೇರ್ಶಕರ ಆಯ್ಕೆ.

(KOLARA): ಬಂಗಾರಪೇಟೆ: ಪಟ್ಟಣದ ಜಮಾತ್ ಆಲಿ ಇಸ್ಲಾಂ ಮಸೀದಿ ಇ ಅಜಾಮ್ ಆಡಳಿತ ಮಂಡಳಿ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ 21 ಮಂದಿ ನಿರ್ದೇಶಕರುಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಜಮಾತ್ ಆಲಿ ಇಸ್ಲಾಂ ಮಸೀದಿ ಇ ಅಜಾಮ್ ಆಡಳಿತ ಮಂಡಳಿ ಸಮಿತಿಗೆ 21 ಸ್ಥಾನಕ್ಕೆ 49 ಮಂದಿ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ 21 ಮಂದಿ ನಿರ್ದೇಶಕರಗಳು ಆಯ್ಕೆಯಾಗಿದ್ದಾರೆ, ಒಟ್ಟು 1349 ಮತದಾರರಿದ್ದು, ಎರಡು ಬಣಗಳಿದ್ದು, ಮತದಾರರನ್ನು ಮತ ಕೇಳುವ ಮೂಲಕ ಬಿರುಸಿನಿಂದ ಚುನಾವಣೆ ನಡೆಯಿತು.


ಚುನಾವಣೆಯಲ್ಲಿ ಅಬ್ದುಲ್ ರಜಾಕ್, 914 ಮತಗಳು, ಅಜಾಮ್ ಪಾಷಾ 762 ಮತಗಳು, ಖಲೀಲ್ 741 ಮತಗಳು, ಸೈಯದ್ ಇದಾಯಿತುಲ್ಲ 72 ಮತಗಳು, ಮಿರಾಜ್ ಪಾಷ 682 ಮತಗಳು, ಅಮ್ಜದ್ ಖಾನ್ 673 ಮತಗಳು, ಅಬ್ದುಲ್ ಅಲೀಮ್ 604 ಮತಗಳು, ಮಹಮ್ಮದ್ ಹಯಾತ್ 542 ಮತಗಳು, ಮಹಮದ್ ಖಾನ್ 539 ಮತಗಳು, ಖಲೀದ್ ಅಹ್ಮದ್ 532 ಮತಗಳು, ಶೇಕ್ ಅಹಮದ್ ಪಾಷಾ 579 ಮತಗಳು, ಸೈಯದ್ ಅಹಮದ್ 515 ಮತಗಳು, ಮಹಮದ್ ಗೌಸ್, ಸುಹೇಲ್ 494 ಮತಗಳು, ಸೈಯದ್ ನಿಜಾಮುದ್ದೀನ್ 493 ಮತಗಳು, ಸಿದ್ದೀಕ್ 485 ಮತಗಳು, ಡಾ. ಸೈಯದ್ ಉದ್ದೀನ್ ಅಹಮದ್ 481 ಮತಗಳು, ಜಲೀನ್ ತಾಜ್ 480 ಮತಗಳು, ವಾಜೀದ್ ಅಹಮದ್ ಆಲ್ ಹಜ್ 472 ಮತಗಳು, ಖಲೀಲ್ ಉಲ್ಲಾಖಾನ್ 460 ಮತಗಳು, ಐದರ್ ಸಾಬ್ 449 ಮತಗಳು, ಮೊಹಮ್ಮದ್ ಕೆಸರ್ ರಹೀಮ್ 446 ಮತಗಳನ್ನು ಗಳಿಸುವ ಮೂಲಕ 21 ನಿರ್ದೇಶಕರುಗಳು ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಘೋಷಿಸಿದ್ದಾರೆ.
ಈ ವೇಳೆ ಸೈಯದ್ ಇದಾಯಿತುಲ್ಲಾ ಮಾತನಾಡಿ ನಮಗೆ ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿದ ಎಲ್ಲಾ ಸದಸ್ಯರುಗಳಿಗೂ, ಮುಖಂಡರಿಗೂ, ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, ಮಸೀದಿಯ ಅಭಿವೃದ್ಧಿಗಾಗಿ ಎಲ್ಲ ನೂತನ ಸದಸ್ಯರು ಒಟ್ಟಾಗಿ ಒಗ್ಗಟ್ಟಾಗಿ ಶ್ರಮಿಸುವುದಾಗಿ ಹೇಳಿದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code