ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹಂಚಿಕೆ.. ಆರೋಪಿ ಪ್ರಜ್ವಲ್ ಬಂಧನ..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಪ್ರಜ್ವಲ್ ಎಂಬ ಯುವಕನನ್ನು ಅಶ್ಲೀಲ ವಿಡಿಯೋ ಹಂಚಿಕೊಂಡ ವಿಷಯವಾಗಿ ಆತನನ್ನು ಬಂಧಿಸಲಾಗಿದೆ.
ಪ್ರಜ್ವಲ್ ಎಂಬಾತ ಸಾಮಾಜಿಕ ಜಾಲತಾಣವಾದ ಇನ್ಸ್ಟಾ ಗ್ರಾಮ್, ಫೇಸ್ಬುಕ್ಖಾತೆಯಲ್ಲಿ ಅಶ್ಲೀಲ ವಿಡಿಯೋ ಹಾಗು ಫೋಟೋ ಹಂಚಿಕೊಂಡಿದ್ದಲ್ಲದೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ಪದಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ, ಟ್ರೋಲ್ ಪೇಜ್ ನ ಅಡ್ಮಿನಿ ಆಗಿದ್ದ ಪ್ರಜ್ವಲ್ ಆರೋಪಿಯನ್ನು ಕುದುರೆಮುಖದಲ್ಲಿ ಬಂದಿಸಿದ್ದು, ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯನ್ನು ಕಳಸ ತಾಲೂಕಿನ ಸಂಸೆ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ.
ಈ ಆರೋಪಕ್ಕೆ ಸಂಬಂದಿಸಿದಂತೆ ಪ್ರಕರಣವನ್ನು ಕುದುರೆಮುಖ ಠಾಣೆಯಲ್ಲಿ ದಾಖಲಾಗಿದೆ.