ಬಜರಂಗದಳದ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ
(Balehonnuru): ವಿಶ್ವ ಹಿಂದು ಪರಿಷತ್ತಿಗೆ 60 ವರ್ಷ ತುಂಬುತ್ತಿರುವ ಹಿನ್ನಲೆ ದೇಶದಾದ್ಯಂತ ಯುವಕರಲ್ಲಿ ರಾಷ್ಟ್ರಭಕ್ತಿ, ಹಿಂದು ಜಾಗೃತಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬಜರಂಗದಳದ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ.
ಶೃಂಗೇರಿ ಜಿಲ್ಲೆಯ ಶೌರ್ಯ ಜಾಗರಣ ರಥಯಾತ್ರೆಯು ನರಸಿಂಹರಾಜಪುರಕ್ಕೆ ನಾಳೆ ಬೆಳಿಗ್ಗೆ 9:00 ಗಂಟೆ, ಕೊಪ್ಪಕ್ಕೆ 11.00 ಗಂಟೆಗೆ, ನಂತರ ಶೃಂಗೇರಿಗೆ ಮದ್ಯಾಹ್ನ 1.30 ಕ್ಕೆ ಹಾಗೂ ಜಯಪುರ ಮಾರ್ಗ ಮೂಲಕವಾಗಿ ಸಂಜೆ 5:30ಕ್ಕೆ ಬಾಳೆಹೊನ್ನೂರು ತಲುಪಲಿದೆ.
ಬಾಳೆಹೊನ್ನೂರಿನಲ್ಲಿ ಶೋಭಯಾತ್ರೆ ಮತ್ತು ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬನ್ನಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಎಂದು ಬಾಳೆಹೊನ್ನೂರು ಬಜರಂಗದಳ ಕಾರ್ಯಕರ್ತರು ತಿಳಿಸಿದ್ದರೆ.