ಕೋಲಾರ

ಎರಡು ಕೋಟಿಗೂ ಹೆಚ್ಚು ಹಣದಲ್ಲಿ 15 ಮೀಟರ್ ಡಬಲ್ ರಸ್ತೆಯ ಸ್ಥಳ ಪರಿಶೀಲನೆ.

ಎರಡು ಕೋಟಿಗೂ ಹೆಚ್ಚು ಹಣದಲ್ಲಿ 15 ಮೀಟರ್ ಡಬಲ್ ರಸ್ತೆಯ ಸ್ಥಳ ಪರಿಶೀಲನೆ.

(KOLARA): ಬಂಗಾರಪೇಟೆ: ಕೆಜಿಎಫ್ ಮುಖ್ಯರಸ್ತೆಯಿಂದ ದೇಶಿಹಳ್ಳಿ ರೈಲ್ವೆ ಗೇಟ್ ವರೆಗೂ ಎರಡು ಕೋಟಿಗೂ ಹೆಚ್ಚು ಹಣದಲ್ಲಿ 15 ಮೀಟರ್ ಡಬಲ್ ರಸ್ತೆಯ ಸ್ಥಳ ಪರಿಶೀಲನೆ ನಡೆಸಿ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡಿರುವವರಿಗೆ ರಸ್ತೆ ತೆರವುಗೊಳಿಸುವಂತೆ  ಶಾಸಕ ಎಸ್.ಎನ್ ನಾರಾಯಣಸ್ವಾಮಿ ಒತ್ತುವರಿದಾರರಿಗೆ ತಿಳಿಸಿದರು.

ಪಟ್ಟಣದ ದೇಶಿಹಳ್ಳಿಯಲ್ಲಿ ವಾರ್ಡ್ ಕಾಮಸಮುದ್ರ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡುವುದನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಂಗಾರಪೇಟೆ ಮತ್ತು ಕೆಜಿಎಫ್ ನ ಮುಖ್ಯ ರಸ್ತೆಯಿಂದ ರೈಲ್ವೇ ಗೇಟಿನ ವರಗೆ ಡಬಲ್ ರಸ್ತೆಯನ್ನು ನಿರ್ಮಾಣ ಮಾಡಲು ಎರಡು ಕೋಟಿ ಗೂ ಹೆಚ್ಚು ಅನುದಾನ ವನ್ನು ಮಂಜೂರಾಗಿದ್ದು ಬೀದಿ ದೀಪಗಳು ಮತ್ತು ಎರಡು ಕಡೆ ಚರಂಡಿ ವ್ಯವಸ್ಥೆಯನ್ನು ಮಾಡುವುದರ ಮೂಲಕ  ಅಭಿವೃದ್ಧಿ ಮಾಡುತ್ತಿರುವುದರಿಂದ ಸಾರ್ವಜನಿಕರ ಸಹಕರಿಸಬೇಕು ಎಂದು ಕೋರಿದರು.

ರಸ್ತೆಯ ಅಗಲೀಕರಣ ಮಾಡುವುದಕ್ಕೆ ಮನೆಗಳನ್ನು ಹೊಡೆಯುತ್ತಿರುವುದರಿಂದಾಗಿ ಸಾರ್ವಜನಿಕರು ಮನವಿ ಮಾಡಿದ ಕಾರಣ ಎರಡು ಅಡಿಗಳ ಅಲವನ್ನು ಕಡತ ಮಾಡಿ ರಸ್ತೆಯ ಕಾಮಗಾರಿಯನ್ನು ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷವಾಗಿ ದೇಶಿಹಳ್ಳಿಗೆ ಸುಮಾರು 2 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ಇತಿಹಾಸದಲ್ಲಿ ದೇಶಿ ಹಳ್ಳಿಗೆ ಇದುವರೆಗೂ ಇಷ್ಟೊಂದು ಹಣವನ್ನು ಬಿಡುಗಡೆ ಮಾಡಿರಲಿಲ್ಲ, ಇದರ ಉದ್ದೇಶವೇನೆಂದರೆ ಈ ರಸ್ತೆ ಬಂಗಾರಪೇಟೆಯಿಂದ ಕಾಮಸಮುದ್ರ ಹಾಗೂ ತಮಿಳುನಾಡು ತನಕ ಸಂಪರ್ಕಿಸುವ ರಸ್ತೆಯಾಗಿದೆ.ಇನ್ನೊಂದು ಕಡೆ ಆಂಧ್ರಭಾಗಕ್ಕೆ ಕೂಡ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ.ಈ ರಸ್ತೆ ಆಂಧ್ರ ಮತ್ತು ತಮಿಳುನಾಡು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗಬಹುದು ಎಂದರು.

ಆದರಿಂದ ಈ ರಸ್ತೆಯನ್ನು ಮೊದಲ ಬಾರಿಗೆ ಡಬಲ್ ರಸ್ತೆಯನ್ನಾಗಿ ಮಾಡಬೇಕು ಎಂದು ಪುರಸಭೆಯಲ್ಲಿ ತೀರ್ಮಾನ ಕೈಗೊಂಡು. ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಈ ಗ್ರಾಮಕ್ಕೆ ಎರಡು ಕೋಟಿಗೂ ಹೆಚ್ಚು ಹಣವನ್ನು ಮಂಜೂರು ಮಾಡಿಸಿದ್ದೇನೆ ಈ ಡಬಲ್ ರಸ್ತೆ ಸಂಪೂರ್ಣವಾಗಿ ಸಿಮೆಂಟ್ ರಸ್ತೆಯಾಗಿರುತ್ತದೆ ಎಂದು ಹೇಳಿದರು.

ಜೊತೆಗೆ ಈ ಗ್ರಾಮಕ್ಕೆ ಯರಗೋಳ ನೀರು ಸಂಪರ್ಕ ಇಲ್ಲದಿರುವುದರಿಂದ ಪೈಪ್ ಲೈನ್ ಅನ್ನು ಅಳವಡಿಸಲು ಸಹ ಕಾಮಗಾರಿ ಪ್ರಾರಂಭ ಮಾಡಲಾಗಿದೆ.ಶೀಘ್ರದಲ್ಲಿ ದೇಶಿಹಳ್ಳಿ ಗ್ರಾಮಕ್ಕೆ ಯರಗೋಳ ನೀರು  ಸರಬರಾಜು ಮಾಡಲಾಗುವುದೆಂದು  ತಿಳಿಸಿದರು.

ಈ ಸಂದರ್ಭದಲ್ಲಿ ಕೆಯುಡಿಎ ಅಧ್ಯಕ್ಷ ಗೋಪಾಲ ರೆಡ್ಡಿ,  ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷರಾದ ಚಂದ್ರಮಣಿ ಮಂಜುನಾಥ್, ಸದಸ್ಯರಾದ ಆರೋಗ್ಯರಾಜನ್, ಮುಖಂಡರಾದ ವೆಂಕಟರಾಮಪ್ಪ, ಆದಿ ನಾರಾಯಣ, ನಾರಾಯಣಸ್ವಾಮಿ, ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ, ಪಿಡಬ್ಲ್ಯೂಇ ಇಂಜಿನಿಯರ್ ರವಿ, ಹಾಗೂ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code