ಕ್ರೀಡೆಗಳಿಂದ ಯುವಕರಿಗೆ ಮಾನಸಿಕ ಸ್ಥಿರತೆ ದೊರೆಯಲಿದೆ ಪಿ.ಎಸ್.ಐ ರವೀಶ್.
(CHIKKAMAGALURU): ಕ್ರೀಡೆಗಳಲ್ಲಿ ಯುವಕರು ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಸ್ಥಿರತೆ ದೊರೆಯಲಿದೆ ಎಂದು ಪಿ.ಎಸ್.ಐ ರವೀಶ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ ಜೇಸಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಯುವಕರಲ್ಲಿ ಚೈತನ್ಯವನ್ನು ತರಲಿದ್ದು, ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿ ಸದೃಢಗೊಳ್ಳುವುದರೊಂದಿಗೆ ಉತ್ತಮ ಆರೋಗ್ಯ ಲಭ್ಯವಾಗಲಿದೆ.
ಜೇಸಿಐ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಬಾಳೆಹೊನ್ನೂರಿನ ಜೇಸಿ ಸಂಸ್ಥೆಯ ವತಿಯಿಂದ ನಾಲ್ಕವೇ ಬಾರಿಗೆ ಸಂಸ್ಥೆಯ ಸದಸ್ಯರಿಗಾಗಿ ಪ್ರೀಮಿಯರ್ ಲೀಗ್ ಅನ್ನು ವಿಶೇಷ ರೀತಿಯಲ್ಲಿ ಆಯೋಜನೆ ಮಾಡಿದ್ದು, ಐಪಿಎಲ್ ಮಾದರಿಯಲ್ಲಿ ತಂಡಗಳನ್ನು ಆಯ್ಕೆಗೊಳಿಸಲಾಗಿದೆ.
ಸಂಸ್ಥೆಯ ಐದು ತಂಡಗಳ ಆಟಗಾರರು ಪರಸ್ಪರ ಸ್ನೇಹ, ವಿಶ್ವಾಸದಿಂದ ಒಂದು ದಿನ ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗುವ ಮೂಲಕ ಸಂಸ್ಥೆಯ ಹಾಗೂ ಕ್ರೀಡೆಯ ಮೇಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.
ಪಂದ್ಯಾವಳಿಯನ್ನು ಪಾರಿವಾಳ ಹಾರಿ ಬಿಟ್ಟು, ಟ್ರೋಫಿ ಅನಾವರಣಗೊಳೀಸಿ ಹಾಗೂ ಬ್ಯಾಟಿಂಗ್ ಮಾಡುವ ಮೂಲಕ ವಿನೂತನವಾಗಿ ಉದ್ಘಾಟಿಸಲಾಯಿತು.
ಉದ್ಯಮಿ ಶುಹೈಬ್, ಕ್ರಿಕೆಟ್ ಆಟಗಾರ ಸಹದೇವ, ಜೇಸಿಐ ಪೂರ್ವಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಬಿ.ಎಸ್.ಅಜಿತ್, ಕಾರ್ಯದರ್ಶಿ ಎಚ್. ಟಿ.ಶೃಜಿತ್, ಕಾರ್ಯಕ್ರಮ ನಿರ್ದೇಶಕ ಇಬ್ರಾಹಿಂ ಶಾಫಿ, ತೀರ್ಪುಗಾರರಾದ ಓ.ಡಿ.ಸ್ಟೀಫನ್, ಜಗದೀಶ್ ಅರಳೀಕೊಪ್ಪ, ಶೇಖರ್ ಇಟ್ಟಿಗೆ, ತಂಡದ ಮಾಲೀಕರಾದ ಡಾ.ನವೀನ್ ಲಾಯ್ಡ್ ಮಿಸ್ಕಿತ್, ಸುಧಾಕರ್, ಸತೀಶ್ ಅರಳೀಕೊಪ್ಪ, ಬಿ.ಸಿ.ಸಂತೋಷ್ ಕುಮಾರ್, ಸವಿನ್ ಹುಯಿಗೆರೆ, ರಚನ್ ಹುಯಿಗೆರೆ ಮತ್ತಿತರರು ಹಾಜರಿದ್ದರು.
ಇಂದಿನ ದಿನಗಳಲ್ಲಿ ಎಲ್ಲಾ ಕ್ರೀಡೆಯು ಹೆಚ್ಚು ಪ್ರಚಲಿತಗೊಳ್ಳುತ್ತಿದ್ದು ಯುವಕರಿಗೆ ಹೊಸ ಶಕ್ತಿ ನೀಡುತ್ತಿದೆ.
ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಂಸ್ಥೆಯಾದ ಜೇಸಿಯವರು ಕೇವಲ ವ್ಯಕ್ತಿತ್ವ ವಿಕಸನ, ಸಮಾಜ ಸೇವೆಗೆ ಮಾತ್ರ ಸೀಮಿತವಾಗಿರದೆ ಸಂಸ್ಥೆಯ ಸದಸ್ಯರನ್ನು ಹುರಿದುಂಬಿಸಲು ಕ್ರೀಡೆಯನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದೇ ವಿಶಿಷ್ಟ ಸ್ಫೂರ್ತಿಯಾಗಿದ್ದು, ಸೋಲು ಗೆಲವು ಒಂದೇ ನಾಣ್ಯದ ಮುಖ ಎಂದರು.
ಜೇಸಿ ಅಲ್ಯುಮಿನಿ ಕ್ಲಬ್‌ನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ವಿವಿಧ ಕ್ರೀಡೆಗಳನ್ನು ಹವ್ಯಾಸಕ್ಕಾಗಿ ಆಡಲಾಗುತ್ತಿತ್ತು. ಆದರೆ ಮುಂದುವರಿದ ಈ ದಿನಗಳಲ್ಲಿ ಸ್ಪರ್ಧೆ, ವೃತ್ತಿಪರವಾಗಿ ಕ್ರೀಡೆಗಳು ನಡೆಯುತ್ತಿವೆ.
ಯುವಜನರಿಗೆ ಕ್ರೀಡೆಯು ಜೀವನದ ಅವಿಭಾಜ್ಯ ಅಂಗವಾಗಿದ್ದು, ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯಶಸ್ವಿಯಾಗಲು ಸಾಧ್ಯವಿದೆ ಎಂದರು.