ಡೊಳ್ಳೇಶ್ವರನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ತುಳುಜಾ ಭವಾನಿ ದೇವಿಯ ಜಾತ್ರಾ ಮಹೋತ್ಸವ
(HAVERI): ಹಾವೇರಿ ಜಿಲ್ಲಾ ಹಾನಗಲ್ ತಾಲೂಕು ಅಕ್ಕಿಆಲೂರು ಡೊಳ್ಳೇಶ್ವರ ಕ್ರಾಸ್ ನಲ್ಲಿರುವ ಶ್ರೀ ತುಳುಜಾ ಭವಾನಿ ದೇವಿಯ 24ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಪ್ರಾತ:ಕಾಲದಲ್ಲಿ ಶ್ರೀ ತುಳಜಾ ಭವಾನಿ ದೇವಿಗೆ ಸಕಲ ಮಂಗಲ ದ್ರವ್ಯಗಳ ಅಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು.
ಕುಂಭಗಳೊಂದಿಗೆ ತುಳಜಾ ಭವಾನಿ ದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಪ್ರಭಾಕರ್ ಬಾಬಜಿ, ಮುರುಳಿಧರ್ ಬಾಬಜಿ ಸುನೀತಾ,ಲೀಲಾವತಿ ಬಾಬಜಿ, ಅಮಿತ್, ಹಾನಗಲ್ ತಾಲೂಕು ಆರೋಗ್ಯ ಅಧಿಕಾರಿ ಡಾ: ಲಿಂಗರಾಜ ಕೆ.ಜಿ ಸೇರಿದಂತೆ, ಗಂಗಮ್ಮ ಬಾಬಜಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು, ತುಳಜಾ ಭವಾನಿ ಸದ್ಭಕ್ತ ಮಂಡಳಿಯವರು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ:ಸಂದೀಪ ಎಲ್.ಉರಣಕರ್ ಸೊರಬ