ಕಡಲತೀರದಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು, ಮೂವರ ಕಾಣೆ
(UTARA KANNADA): ಪ್ರವಾಸಕ್ಕೆಂದು ಬಂದಿದ್ದ ಓರ್ವ ಶಾಲಾ ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿ, ಮೂವರು ವಿದ್ಯಾರ್ಥಿನಿಯರು ಕಾಣೆಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಕಡಲತೀರದಲ್ಲಿ (ಮಂಗಳವಾರ) ನಡೆದಿದೆ.
ಕೋಲಾರ ಮುಳಬಾಗಿಲಿನ ಶ್ರಾವಂತಿ (15) ಎಂಬಾಕೆಯೇ ನೀರಿನಲ್ಲಿ ಮುಳುಗಿ ಸಾವಿಗೀಡಾದ ವಿದ್ಯಾರ್ಥಿನಿ. ಮುರುಡೇಶ್ವರ ಸಮುದ್ರಕ್ಕಿಳಿದಿದ್ದ ಮೂವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಕಾಣೆಯಾಗಿರುವ ವಿದ್ಯಾರ್ಥಿನಿಯರಾಗಿದ್ದಾರೆ.
46 ಶಾಲಾ ವಿದ್ಯಾರ್ಥಿಗಳು, 6 ಶಿಕ್ಷಕರು ಸೇರಿದಂತೆ ಒಟ್ಟು 57 ಜನರು ಬಸ್‌ನಲ್ಲಿ ಪ್ರವಾಸಕ್ಕೆ ಬಂದಿದ್ರು. ಸಂಜೆ ವೇಳೆ ಸಮುದ್ರ ನೀರಿನಲ್ಲಿ ಈಜುವಾಗ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಾಣೆಯಾಗಿರುವ ಇನ್ನೂ ಮೂವರು ವಿದ್ಯಾರ್ಥಿನಿಯರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ನೀರಿನಲ್ಲಿ ಮುಳುಗಿದ್ದ ಮೂವರು ವಿದ್ಯಾರ್ಥಿನಿಯರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಶೋಧಾ (15), ವೀಕ್ಷಣಾ (15), ಲಿಪಿಕಾ (15) ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದರು.
ಕೋಲಾರ ಜಿಲ್ಲೆಯ ಮುಳಬಾಗಿಲು ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ರು 46 ಶಾಲಾ ವಿದ್ಯಾರ್ಥಿಗಳು, 6 ಶಿಕ್ಷಕರು ಸೇರಿದಂತೆ ಒಟ್ಟು 57 ಜನರು ಬಸ್‌ನಲ್ಲಿ ಪ್ರವಾಸಕ್ಕೆ ಬಂದಿದ್ರು. ಸಂಜೆ ವೇಳೆ ಸಮುದ್ರ ನೀರಿನಲ್ಲಿ ಈಜುವಾಗ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಾಣೆಯಾಗಿರುವ ಇನ್ನೂ ಮೂವರು ವಿದ್ಯಾರ್ಥಿನಿಯರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಘಟನೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕರ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿ ಸಾವು, ಉಳಿದ ಮೂವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಎರಡು ತಿಂಗಳಿನಿಂದ ಲೈಫ್ ಗಾರ್ಡ್‌ಗಳಿಗೆ ಪ್ರವಾಸೋದ್ಯಮ ಇಲಾಖೆ ಸಲಕರಣೆ ಪೂರೈಸಿಲ್ಲ. ಲೈಫ್ ಗಾರ್ಡ್ಸ್ ಮಕ್ಕಳನ್ನು ರಕ್ಷಿಸಲಾಗದ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಲೈಫ್ ಗಾರ್ಡ್ ಗಳಿಗೆ ಅಗತ್ಯ ಸಲಕರಣೆ ಒದಗಿಸುವಂತೆ ಸುದ್ದಿ ಮಾಡಿದ್ರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತಕೊಂಡಿಲ್ಲ. ಇಂತಹ ದುರ್ಘಟನೆಗಳು ನಡೆಯುತ್ತಿದ್ರೂ ಪ್ರವಾಸೋದ್ಯಮ ಇಲಾಖೆ ಮತ್ತೆ ನಿರ್ಲಕ್ಷ್ಯ ವಹಿಸುತ್ತಿದೆ.
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಸಲಕರಣೆ ಸಮಸ್ಯೆ ಬಗೆಹರಿಸುವ ಅಶ್ವಾಸನೆ ನೀಡಿದ್ದರು. ತಮ್ಮದೇ ಕ್ಷೇತ್ರದ ಪ್ರವಾಸಿ ತಾಣಕ್ಕೆ ಸುರಕ್ಷತೆ ಒದಗಿಸುವಲ್ಲಿ ಸಚಿವ ಮಾಂಕಾಳು ವೈದ್ಯ ವಿಫಲರಾಗಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮುರುಡೇಶ್ವರದಲ್ಲಿ ಪ್ರವಾಸಿಗರು ಸಮುದ್ರ ಪಾಲಾಗಿದ್ರು. ಬಳಿಕ ಪ್ರವಾಸಿಗರನ್ನು ಕಡಲ ತೀರಕ್ಕೆ ಬಾರದಂತೆ ತಾಲೂಕಾಡಳಿತ ನಿರ್ಬಂಧ ಹೇರಿತ್ತು. ಕಳೆದ ಒಂದು ತಿಂಗಳಿನಿಂದ ನಿರ್ಬಂಧ ತೆರವುಗೊಳಿಸಿದ್ರೂ ಸುರಕ್ಷತಾ ಕ್ರಮ ಮಾತ್ರ ಕೈಗೊಂಡಿರಲಿಲ್ಲ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೂ ಬಾಳಿ ಬದುಕಬೇಕಾಗಿದ್ದ ವಿದ್ಯಾರ್ಥಿನಿಯ ಸಾವು ಮಾತ್ರ ನಿಜಕ್ಕೂ ದುರಂತ.
ವರದಿ: ವಿಷ್ಣು ಕೋಲಾರ