ಕುವೆಂಪು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ರಂಗ ನಟಿ ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿನಿಗಳು
(SHIVAMOGA): ಸೊರಬ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ರಂಗ ನಟಿ ಪ್ರಶಸ್ತಿ ಪಡೆದುಕೊಂಡ ಬಿ.ಸಿ.ಎ.ವಿದ್ಯಾರ್ಥಿನಿ ಸಹನಾ ಮತ್ತು ಬೆಂಗಳೂರಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಕ್ಲೇ ಮಾಡೆಲಿಂಗ್ ದಕ್ಷಿಣ ಭಾರತದ ಸ್ಪರ್ದೆ ಪ್ರತಿಭೆ ಸ್ಪರ್ಧೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಭಾಗವಹಿಸಿದ ಸೊರಬ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಶ್ರೇಯಸ್ 4 ನೇ ಸ್ಥಾನ ನೆಡೆಯುವ ಮೂಲಕ ಕಾಲೇಜಿಗೆ ಮತ್ತು ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಸಹನಾ ಮತ್ತು ಶ್ರೇಯಸ್ ಅವರಿಗೆ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಪ್ರಾಂಶುಪಾಲೆ ಡಾ| ನೇತ್ರಾವತಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಗಮನ ನೀಡಿದರೆ ಸಾಲದು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ ಸಕ್ರಿಯವಾಗಿ ಭಾಗವಹಿಸಿದಾಗ ಸಾಧನೆ ಮಾಡಲು ಸಾಧ್ಯ ಇವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಸಹನಾ ಮತ್ತು ಶ್ರೇಯಸ್ ಪೋಷಕರು.ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಪವಿತ್ರ.ಎ.ವಿ.ಆಸ್ಮಾ, ಕಾವ್ಯ, ಡಾ|ಜಿ.ಅರ್.ಜೋಶಿ,ಡಾ|ಮಹೇಶ್ವರಿ,ಆಶಾ ಗೌಡರ್, ನೇಂದ್ರಪ್ಪ, ಯೋಗೀಶ್, ಮಂಜುನಾಥ್, ಶಂಕರ್ ನಾಯ್ಕ್, ರಾಘವೇಂದ್ರ, ಚಂದ್ರಪ್ಪ, ಪ್ರಮೋದ್, ರಾಘವೇಂದ್ರ, ರವಿ, ಮಾದೇಶ್,ಹಬಿಬುಲ್ಲಾ,ಮಮತ ನಾಯ್ಕ್, ಕೊಟ್ರೇಶ್, ಮಂಜುಳಾ, ಮಿಲನ,ರವಿ ಹೆಗಡೆ, ಪ್ರಶಾಂತ್ ಹೆಗಡೆ,ಗುರುದತ್ತ, ಚರಣ್ ಸೇರಿದಂತೆ ಮೊದಲಾದವರಿದ್ದರು.
ವರದಿ: ಮಧು ರಾಮ್ ಸೊರಬ