ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು, ಓದಿನೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದು.
(KOLARA): ಬಂಗಾರಪೇಟೆ: ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು ಓದಿನೊಂದಿಗೆ ಕ್ರೀಡೆಗಳಲ್ಲಿ ಆಸಕ್ತಿ ರೂಢಿಸಿಕೊಳ್ಳಬೇಕು ಕ್ರೀಡೆ ಮನಸ್ಸಿಗೆ ಮುದ ನೀಡುವುದಲ್ಲದೆ ದೇಹಕ್ಕೆ ಚೈತನ್ಯ ತುಂಬಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ತಿಳಿಸಿದರು.
ತಾಲೂಕಿನ ಬೆಮಲ್ ನಗರದ ಕ್ರೀಡಾಂಗಣದಲ್ಲಿ ಸಂತೋಷ್ ವಿದ್ಯಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಮಕ್ಕಳಲ್ಲಿನ ಪ್ರತಿಭೆ ಹೊರತೆಗೆಯಲು ಕ್ರೀಡೆ ಸೂಕ್ತ ವೇದಿಕೆ ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಕರು ಹೆಚ್ಚಿನ ಕಾಳಜಿವಹಿಸಬೇಕು. ಪಠ್ಯದ ಜೊತೆಗೆ ಕ್ರೀಡೆಗಳಲ್ಲೂ ಹಲವಾರು ಪ್ರತಿಭೆಗಳಿದ್ದು. ಅಂತಹ ಪ್ರತಿಭೆ ಹೊರಬರಲು ಇಂದು ಸಂತೋಷ್ ಶಾಲೆಯ ವತಿಯಿಂದ ಕ್ರೀಡಾಕೂಟವೆಂಬ ಉತ್ತಮ ವೇದಿಕೆ ನೀಡಿದೆ ಇದನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಎಂದು ಹಾರೈಸಿದರು.
ಸಂತೋಷ್ ಶಾಲೆಯ ಕಾರ್ಯದರ್ಶಿ ಆದಿಲ್ ಪಾಶಾ ಮಾತನಾಡಿ,ಮಕ್ಕಳ ಮಾನಸಿಕ ಮತ್ತು ದೈಹಿಕ ಕ್ರಿಯಾಶೀಲ ಚಟುವಟಿಕೆಗೆ ಕ್ರೀಡಾಕೂಟ ಮಹತ್ವವಾಗಿದೆ.ಎಲ್ಲ ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕೆಂದು ಹೇಳಿದರು.
ಕ್ರೀಡಾಕೂಟದಲ್ಲಿ ಸೋಲು, ಗೆಲವು ಅನ್ನುವುದು ಸಹಜ ಗೆಲ್ಲವುದು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ,ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶೈಕ್ಷಣಿಕವಾಗಿ ಕ್ರೀಡೆಯೂ ಅಷ್ಟೇ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಸಂತೋಷ್ ಶಾಲೆಯ ಅಧ್ಯಕ್ಷರಾದ ನಸೀಮ, ತಸಿಮಾ ಫಾತಿಮಾ, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಕಿಶೋರ್ ಪಾಟೀಲ್, ರಫೀಕ್, ಸೈಯದ್ ರಫಿ, ಮುನಿಯಪ್ಪ, ವಾಜಿದ್ ಖಾನ್ ಹಾಗೂ ಶಾಲೆಯ ಶಿಕ್ಷಕರು ಇದ್ದರು.
ವರದಿ ವಿಷ್ಣು ಕೋಲಾರ