Entertainmentದೇಶ

ಜೈಲರ್ ಹಿಟ್ : ರಜಿನಿಗೆ 72 ವಯಸ್ಸಿನಲ್ಲೂ ಅವರ ಸಂಭಾವನೆ ಎಷ್ಟು ಗೊತ್ತಾ..!

ಜೈಲರ್ ಹಿಟ್ : ರಜಿನಿಗೆ 72 ವಯಸ್ಸಿನಲ್ಲೂ ಅವರ ಸಂಭಾವನೆ ಎಷ್ಟು ಗೊತ್ತಾ..!

ಸೂಪರ್ ಸ್ಟಾರ್ ರಜನಿಕಾಂತ್ 7 ವರ್ಷಗಳಲ್ಲಿ ಸೂಪರ್ ಹಿಟ್ ಚಿತ್ರವಾಗಿ ಹೊರೊಮ್ಮಿದ ( ಜೈಲರ್ ) JAILAR ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸಂತಸದ ಸಂಗತಿಯಾಗಿದೆ. ಬರೋಬರಿ ಜೈಲರ್ ಚಿತ್ರವು 600 ಕೋಟಿ ಹಣ ಕಲೆಕ್ಷನ್ ಮಾಡಿದ್ದು ರಜಿನಿಕಾಂತ್ ಅವರಿಗೆ ನಿರ್ದೇಶಕರು ಗಿಫ್ಟ್ ಮೇಲ್ ಗಿಫ್ಟ್ ನೀಡುತ್ತಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 72ನೇ ವಯಸ್ಸಿನಲ್ಲು ನಟನೆಯ ಜಲಕ್ ತೋರಿಸಿದರೆ. ಅಭಿಮಾನಿಗಳಿಗೆ ಮತ್ತೆ ನಟನೆಯ ಮೂಲಕ ಪಡೆಯಪ್ಪ ಬ್ಯಾಕ್ ಎಂಬ ಸಿಗ್ನಲ್ ಕೊಟ್ಟಿದ್ದಾರೆ. ಹಾಗೆ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಬಾಚಿದ್ದಾರೆ ಸನ್ ಪಿಚರ್ಸ್.
ಭರತದಲ್ಲಿ ಸ್ಟಾರ್‌ ನಟರಿಗೇನೂ ಕೊರತೆಯಿಲ್ಲ. ಆದ್ರೆ ಸಂಭಾವನೆ ವಿಚಾರದಲ್ಲಿ ದಕ್ಷಿಣದ ಸೂಪರ್‌ ಸ್ಟಾರ್‌ ರಜನೀಕಾಂತ್‌ ಎಲ್ಲರಿಗಿಂತ ಮುಂದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಡೆಯಪ್ಪ ಪಾತ್ರರಾಗಿದ್ದಾರೆ.

ಜೈಲರ್ ಚಿತ್ರದ ಯಶಸ್ಸಿನ ನಂತರ, ಮೆಗಾಸ್ಟಾರ್ ರಜನಿಕಾಂತ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡರು ಇತ್ತೀಚಿನ ವರದಿಗಳ ಪ್ರಕಾರ ಜೈಲರ್ ಚಿತ್ರಕ್ಕೆ ರಜನಿಕಾಂತ್ ಭಾರೀ ಮೊತ್ತವನ್ನ ಸಂಭಾವನೆಯಾಗಿ ಪಡೆದಿದ್ದಾರೆ.
ಜೈಲರ್ ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಇತ್ತೀಚೆಗೆ ರಜನಿಕಾಂತ್ ಅವರಿಗೆ ಲಾಭ ಹಂಚಿಕೆ ಚೆಕ್ ನೀಡಿದ್ದಾರಂತೆ. ಇದು 10 ಅಥವಾ 20 ಕೋಟಿ ರೂಪಾಯಿಯ ಚೆಕ್‌ ಅಲ್ಲ, ಸಂಪೂರ್ಣ 100 ಕೋಟಿ ಎಂದು ಹೇಳಲಾಗುತ್ತಿದೆ. ರಜನಿಕಾಂತ್ ಅವರಿಗೆ ಜೈಲರ್ ಚಿತ್ರದ ನಟನೆಗಾಗಿ ಈ ಹಿಂದೆ 110 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಹಾಗಾಗಿ ಒಟ್ಟಾರೆ ರಜನಿ ಜೈಲರ್‌ ಸಿನೆಮಾಗೆ 210 ಕೋಟಿ ರೂಪಾಯಿ ಸಂಭಾವನೆ ಪಡೆದಂತಾಗಿದೆ. ಇದೀಗ ರಜನಿಕಾಂತ್‌ ಭಾರತದ ಅತ್ಯಂತ ದುಬಾರಿ ನಟ.


ರಜನಿಕಾಂತ್‌ಗೆ 210 ಕೋಟಿ ರೂಪಾಯಿ ಸಂಭಾವನೆ ನೀಡಿರುವ ಬಗ್ಗೆ ಜೈಲರ್ ನಿರ್ಮಾಪಕರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ರಜನೀಕಾಂತ್‌ ಕೂಡ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನೊಂದೆಡೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಚಿತ್ರ ಸೂಪರ್‌ ಹಿಟ್‌ ಆಗಿದೆ. ಯಾವುದೇ ಹೈ-ಫೈ ಪ್ರಚಾರವಿಲ್ಲದೆ ಗದರ್ 2 ಮತ್ತು OMG 2 ಗಿಂತ ಒಂದು ದಿನ ಮುಂಚಿತವಾಗಿ ಜೈಲರ್ ಬಿಡುಗಡೆಯಾಯಿತು. ಸದ್ಯ ಜೈಲರ್ ಚಿತ್ರ 600 ಕೋಟಿ ಕಲೆಕ್ಷನ್‌ ಮಾಡಿದೆ. ಭಾರತದಲ್ಲೇ 328 ಕೋಟಿ ಗಳಿಸಿದೆ. ರಜನಿಕಾಂತ್, ತಮನ್ನಾ ಭಾಟಿಯಾ, ರಮ್ಯಕೃಷ್ಣ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Scan the code