ಕೋಲಾರನ್ಯೂಸ್

5 ತಿಂಗಳ ಗರ್ಭಿಣಿಗೆ‌ ಅತಿ ವಿರಳ ಹಾಗು ಕ್ಲಿಷ್ಟಕರ ಸರ್ಜರಿ ಮಾಡಿದ ನಗರದ  ವಂಶೋದಯ ಆಸ್ಪತ್ರೆ ವೈದ್ಯರು……!

5 ತಿಂಗಳ ಗರ್ಭಿಣಿಗೆ‌ ಅತಿ ವಿರಳ ಹಾಗು ಕ್ಲಿಷ್ಟಕರ ಸರ್ಜರಿ ಮಾಡಿದ ನಗರದ  ವಂಶೋದಯ ಆಸ್ಪತ್ರೆ ವೈದ್ಯರು……!

(KOLARA): ಐದು ತಿಂಗಳ  ಗರ್ಭಿಣಿ ಸ್ತ್ರೀಯೊಬ್ಬರಿಗೆ ಅತಿ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ನೀಡಿ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆ ಇಲ್ಲದ ಹಾಗೆ ಚಿಕಿತ್ಸೆಯನ್ನು ನೀಡಿದ್ದಾರೆ ವಂಶೋದಯ ಆಸ್ಪತ್ರೆ ವೈದ್ಯರು. ವಂಶೋದಯ ಆಸ್ಪತ್ರೆಯ ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಚಿಕಿತ್ಸೆ ಮತ್ತು ಸ್ವಚ್ಚತೆಗೆ ಖ್ಯಾತಿ ಪಡೆದಿರುವ ಕೋಲಾರದ ವಂಶೋದಯ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟಿ ಸೆಂಟರ್ ಇದೀಗ ಮತ್ತೊಂದು ಪ್ರಶಂಸೆಗೆ ಪಾತ್ರವಾಗಿದೆ.

ರೋಗಿಗೆ ಜಾಂಡೀಸ್ ಕಾಯಿಲೆ ಇದ್ದು ಪಿತ್ತಕೋಶ ಮತ್ತು ಪಿತ್ತನಾಳ ಎರಡು ಕಡೆ ಕಲ್ಲು ಇದ್ದದ್ದರಿಂದ  ಕಲ್ಲುಗಳನ್ನು ತೆಗೆಯುವುದು ಬಹಳ ಅನಿವಾರ್ಯವಾಗಿತ್ತು,ಆದರೆ ರೋಗಿಯು ಐದು ತಿಂಗಳು ಗರ್ಭಿಣಿಯಾದ್ದರಿಂದ ಲ್ಯಾಪ್ರೋಸ್ಕೋಪಿ ಮಾಡಲು ಸಹ ಸಾದ್ಯವಾಗದ ಕ್ಲಿಷ್ಟಕರ ಹಾಗು ಕಷ್ಟದ  ಪರಿಸ್ಥಿತಿಯಲ್ಲಿ ವಂಶೋದಯ ಆಸ್ಪತ್ರೆಯ ಗ್ಯಾಸ್ಟ್ರೋ ಸರ್ಜನ್ ಡಾ.ವಿನಯ್ ಹಾಗು ತಂಡದ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡಿ ತಾಯಿ ಹಾಗು ಗರ್ಭದಲ್ಲಿರುವ ಮಗುವಿಗೆ ಯಾವುದೇ ಹಾನಿಯಾಗದಂತೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ವಂಶೋದಯ ಆಸ್ಪತ್ರೆಯ ಪ್ರಸಿದ್ದ ಗ್ಯಾಸ್ಟ್ರೋ ಸರ್ಜನ್ ಡಾ.ವಿನಯ್ ರವರು ನಮ್ಮ ಬಳಿ ರೋಗಿ ಬಂದಾಗ ಐದು ತಿಂಗಳ ಗರ್ಭಿಣಿಯಾಗಿದ್ದು,ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಎರಡು ಭಾಗಗಳಲ್ಲಿ ಕಲ್ಲುಗಳಿದ್ದವು, ಹಾಗು ರೋಗಿಗೆ ಜಾಂಡೀಸ್ ಕಾಯಿಲೆಯ ತೀವ್ರತೆಯು ಹೆಚ್ಚಾಗಿತ್ತು.

ಸಾಮಾನ್ಯವಾಗಿ ಬೇರೆ ರೋಗಿಗಳಿಗೆ ಲ್ಯಾಪ್ರೋಸ್ಕೋಪಿ ಅಥವಾ ಇಆರ್ ಸಿಪಿ ಎಂಬ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತೇವೆ ಆದರೆ ಈ ಪ್ರಕರಣದಲ್ಲಿ ರೋಗಿ ಗರ್ಭಿಣಿ ಆದ್ದರಿಂದ ಎಕ್ಸರೇ(ವಿಕಿರಣಗಳನ್ನು ) ಬಳಸಿ ಇಆರ್ಸಿಪಿ ಮಾಡಲು ಸಾದ್ಯವಾಗದ ಪರಿಸ್ಥಿತಿ ನಮಗೆ ಅತಿ ದೊಡ್ಡ ಸವಾಲಾಗಿತ್ತು, ಶಸ್ತ್ರ ಚಿಕಿತ್ಸೆ ಮಾಡದೇ ಹೋದರೆ ತಾಯಿ ಮಗುವಿಗೆ ತೊಂದರೆ ಆಗುವುದರ ಜೊತೆಗೆ ಜಾಂಡೀಸ್ ಹೆಚ್ಚಾಗುವ ಸಾದ್ಯತೆ ಇದ್ದದ್ದರಿಂದ ನಾವು ರಿಸ್ಕ್ ತೆಗೆದುಕೊಂಡು ವಿಕಿರಣಗಳನ್ನು ಬಳಸದೆ ಲ್ಯಾಪ್ರೋಸ್ಕೋಪಿಯ ಮುಖಾಂತರ ಶಸ್ತ್ರ ಚಿಕಿತ್ಸೆ ಮಾಡಿ ಎರಡು ಭಾಗದಲ್ಲಿದ್ದ ಕಲ್ಲನ್ನು ಹೊರತೆಗೆಯಲಾಯಿತು. ಶಸ್ತ್ರ ಚಿಕಿತ್ಸೆ ಯ ಮೂರನೆ ದಿನ ರೋಗಿಯು ಯಾವುದೇ ರೋಗ ಲಕ್ಷಣಗಳಿಲ್ಲದೆ ಮನೆಗೆ ಕಳುಹಿಸಲಾಯಿತು. ಇನ್ನು ಈ ಶಸ್ತ್ರ ಚಿಕಿತ್ಸೆ ಯಿಂದ ಮಗು ಮತ್ತು ತಾಯಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ರು. ತಮ್ಮ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಹಾಗು ತಮ್ಮ ಗರ್ಭದಲ್ಲಿರುವ ಮಗುವಿನ ಆರೋಗ್ಯ ಕಾಪಾಡಿದ ಡಾ.ವಿನಯ್ ಹಾಗು ಅವರ ತಂಡಕ್ಕೆ ರೋಗಿ ಹಾಗು ಅವರ ಕುಟುಂಬದವರು ಕೃತಜ್ಞತೆಯನ್ನು ತಿಳಿಸಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code