ಕೋಲಾರನ್ಯೂಸ್

ಬಹುಭಾಷ ನಟ ಪ್ರಭುದೇವ ರವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಬಹುಭಾಷ ನಟ ಪ್ರಭುದೇವ ರವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

(KOLARA): ಬಂಗಾರಪೇಟೆ :ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಡ್ಯಾನ್ಸ್ ಬಹುಭಾಷ ನಟ ಪ್ರಭುದೇವ ತಾಲೂಕಿನ ಐಷರಾಮಿ ವಿಲ್ಲಾವನ್ನು ಖರೀದಿ ಮಾಡಿ ಪಟ್ಟಣದ ಉಪನೋಂದ ಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಂಡರು.

ಕೋಲಾರ ಜಿಲ್ಲೆಯು ತಮಿಳುನಾಡು ಹಾಗೂ ಆಂದ್ರ ಪ್ರದೇಶದ ರಾಜ್ಯಗಳಿಗೆ ಹೊಂದಿ ಕೊಂಡಿರುವ ಗಡಿಭಾಗದ ಪ್ರದೇಶವಾಗಿರುವುದರಿಂದ ಖ್ಯಾತ ತಮಿಳು ನಟರಾಗಿರುವ ಪ್ರಭು ದೇವ ಅವರು ತಾಲೂಕಿನ ಹಂಚಾಳ ಗೇಟಿನಲ್ಲಿರುವ ಅಂತರರಾಷ್ಟ್ರೀಯ ಖ್ಯಾತಿಯ ಜಿಯೋನಿ ಗಾಲ್ಫ್ ಪ್ರದೇಶದಲ್ಲಿ ಹೊಸದಾಗಿ ವಿಲ್ಲಾವನ್ನು ಖರೀದಿ ಮಾಡಿದ್ದಾರೆ.

ಅಭಿಮಾನಿಗಳು ಕೆಲಕಾಲ ದಂಗಾಗಿದ್ದಾರೆ. ಯಾರಿಗೂ ತಿಳಿಯದಂತೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರಭುದೇವ ಬಂದು ಅಚ್ಚರಿ ಮೂಡಿಸಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿ ಯಲ್ಲಿ ಪೋಟೊ ಕೊಟ್ಟು, ಸಹಿ ಮಾಡಿ ವಾಪಸ್ ಆಗಿದ್ದಾರೆ. ಇನ್ನೂ ಪ್ರಭುದೇವ ಬರುವ ಬಗ್ಗೆ ಕುರಿತು ಮೊದಲೆ ಅಧಿಕಾರಿಗಳಿಗೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ನಟ ಪ್ರಭುದೇವ ಬರುವುದನ್ನೇ ಕಾದು ಕುಳಿತಿದ್ದ ಅಭಿಮಾನಿಗಳು ಅವರ ಫೋಟೋಗಾಗಿ ಮುಗಿಬಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code