ನ್ಯೂಸ್ಶಿವಮೊಗ್ಗ

ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಸಾವು.

ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಸಾವು.

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಬ್ಬಂದಿ ನಾಗರಾಜ್(35) ಡೆಂಗ್ಯೂನಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಸಾವನಪ್ಪಿದ ಘಟನೆ ನಡೆದಿದೆ.

ಕಳೆದ ಕೆಲಸ ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದ ನಾಗರಾಜ್. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಡೆಂಗ್ಯೂಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಬಲಿಯಾಗಿದ್ದಾರೆ.

ಶುಗರ್ ನಿಂದಲೂ ಬಳಲುತ್ತಿದ್ದ ನಾಗರಾಜ್, ಪ್ಲೇಟ್ ಲೆಟ್ ಗಳು 26,000 ಕಡಿಮೆಗೆ ಕುಸಿದಿದ್ದವು. ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಡೆಂಗ್ಯೂನಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ
ಸಾಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಪ್ಪ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code