ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮೂರುವರೆ ಗಂಟೆ ಒಳಗೆ ಬಂಧಿಸಿದ ಪೊಲೀಸರು
(CHIKKAMAGALURU): ತನ್ನ ಬಿಟ್ಟು ಗಂಡನ ಜೊತೆ ತೆರಳಿದಕ್ಕೆ ಸಿಟ್ಟು ಮಾಡಿಕೊಂಡು ಪ್ರಿಯತಮೆಯ ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ NR ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದ ತೃಪ್ತಿ(29) ಎಂಬ ಗೃಹಿಣಿಯ ಹತ್ಯೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿ ಆನಂತರ ಪ್ರೀತಿಗೆ ತಿರುಗಿ ಇಂದು ಫೇಸ್ಬುಕ್ ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆಯು 12.30 ರ ಸಮಯಕ್ಕೆ ಗೃಹಿಣಿಯ ಮನೆಯಲ್ಲಿ ನಡೆದಿದ್ದು ಆನಂತರ ಮನೆಯ ಹಿಂಭಾಗದಲ್ಲಿರುವ ಕಾಫಿ ತೋಟದ ಕೃಷಿ ಹೊಂಡದಲ್ಲಿ ಗೃಹಿಣಿಯನ್ನು ಎಸೆದು ಆರೋಪಿ ಚಿರಂಜೀವಿ ಕಿಚೆ ಬಿ ಗ್ರಾಮದ ಅರಣ್ಯದಲ್ಲಿ ಪರಾರಿಯಾಗಿದ್ದನು.
ಆರೋಪಿ ಚಿರಂಜೀವಿಯನ್ನು ಪೊಲೀಸರು ಘಟನೆ ನಡೆದು ಮೂರುವರೆ ಗಂಟೆಯಲ್ಲೇ ಬಂದಿಸಿದ್ದಾರೆ. ಡಿ ವೈ ಎಸ್ ಪಿ, ಎಸ್ ಪಿ ನೇತೃತ್ವದ ಸ್ಪೆಷಲ್ ಟೀಮ್, ಪಿಎಸ್ಐ ರವೀಶ್, ಕಾರ್ಯಚರಣೆಯನ್ನು ಮುಂದುವರಿಸಲಾಗಿತ್ತು ಅದೃಷ್ಟ ವಶಕ್ಕೆ ಚಿರಂಜೀವಿ ಘಟನೆ ನಡೆದ ಸ್ಥಳದಿಂದ ಸುಮಾರು 3 ಕಿಲೋ ಮೀಟರ್ ಒಳಗೆ ಇರುವಂತ ಗಡಿಗೇಶ್ವರ ಗ್ರಾಮದಲ್ಲಿ ನಡೆದುಕೊಂಡು ಬರುವಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದು ಬಾಳೆಹೊನ್ನೂರು ಪೊಲೀಸರಿಂದ ಹಂತಕನನ್ನು ಬಂಧಿಸಿದ್ದು ಈಗ ಪೊಲೀಸರ ವಶದಲ್ಲಿ ಇದ್ದಾನೆ.