ಪ್ರಾಣಿ ಹಿಂಸೆ ಮಾಡಿದ್ದ ಕಾಮುಕನನ್ನು ಬಂಧಿಸಿದ ಪೊಲೀಸರು
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಇರುವ ಜಯಪುರ ಎಂಟರ್ ಪ್ರೈಸೆಸ್ ಅಂಗಡಿ ಮುಂಭಾಗದ ಕಟ್ಟೆಯ ಮೇಲೆ ಕಟ್ಟೆಮನೆ ವಾಸಿ ಶಿವರಾಜ ಎಂಬಾತ ಕುಳಿತುಕೊಂಡು ಬೀದಿ ನಾಯಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಪ್ರಾಣಿಗೆ ಹಿಂಸೆ ನೀಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಸುದ್ದಿಯು ವೈರಲ್ ಆಗಿತ್ತು.
ಈ ಸಂಬಂಧ ಜಯಪುರ ಪೊಲೀಸ್ ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸದರಿ ಘಟನೆಗೆ ಸಂಬಂಧಿಸಿದ ವಿಡಿಯೋ ಪೋಟೆಜ್ ನ್ನು ಪರಿಶೀಲಿಸಿ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 30/2024 ಕಲಂ:- 292 ಬಿ,ಎನ್,ಎಸ್, ಹಾಗೂ ಕಲಂ 11(1)(A) PREVENTION OF CRUELTY TO ANIMALS ACT ರಡಿಯಲ್ಲಿ ಪ್ರಕರಣ ದಾಖಲಿಸಿ ಸದರಿ ಆರೋಪಿಯನ್ನು ಬಂಧಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಿರುತ್ತಾರೆ.