ಕ್ರೈಂ ನ್ಯೂಸ್ಶಿವಮೊಗ್ಗ

ಮನೆಯ ಹಂಚು ತೆಗೆದು ಕಳ್ಳತನ ಮಾಡಿದವನನ್ನು ಬಂಧಿಸಿದ ಪೊಲೀಸರು

ಮನೆಯ ಹಂಚು ತೆಗೆದು ಕಳ್ಳತನ ಮಾಡಿದವನನ್ನು ಬಂಧಿಸಿದ ಪೊಲೀಸರು

(SHIVAMOGA):  ಸೊರಬ: ಮನೆಯ ಹಂಚು ತಗೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 50 ಸಾವಿರ ರೂ., ಮೌಲ್ಯದ ಆಭರಣ ಮತ್ತು 50 ಸಾವಿರ ರೂ.,, ನಗದು ವಶಕ್ಕೆ ಪಡೆದಿದ್ದಾರೆ.  

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ನಿವಾಸಿ ಗೋಪಿ ದೇವೇಂದ್ರಪ್ಪ ( 19) ಬಂಧಿತ ಆರೋಪಿ. ಕಳೆದ ಒಂದು ತಿಂಗಳ ಹಿಂದೆ ಕಾನುಕೇರಿ ಬಡಾವಣೆಯ ನಾಗರಾಜ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಮನೆಯ ಹಂಚು ತಗೆದು ಕಳ್ಳತನ ಮಾಡಿದ್ದನು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಎಸ್ಪಿ ಮಿಥುನ್ ಕುಮಾರ್ , ಎಎಸ್ಪಿ ಗಳಾದ ಅನಿಲ್ ಭೂಮರೆಡ್ಡಿ, ಕಾರ್ಯಪ್ಪ, ಶಿಕಾರಿಪುರ ಡಿವೈಎಸ್ಪಿ ಕೆ.ಇ. ಕೇಶವ ಹಾಗೂ ಸೊರಬ ಸಿಪಿಐ ಎಲ್. ರಾಜಶೇಖರ್ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಎಚ್.ಎನ್. ನಾಗರಾಜ್ ಹಾಗೂ ಪೊಲೀಸ್ ಗೌಡ್ರು ನೇತೃತ್ವದಲ್ಲಿ ಹೆಡ್ ಕಾನ್ಸ್‌ಟೇಬಲ್ ನಾಗೇಶ್, ಸಿಬ್ಬಂದಿ ರಾಘವೇಂದ್ರ, ಲೋಕೇಶ್, ವಿನಯಕುಮಾರ್, ಜಗದೀಶ್ ಬೇಲೂರಪ್ಪನವರ್ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ಸಂದೀಪ್ ಯು. ಎಲ್, ಸೊರಬ

Leave a Reply

Your email address will not be published. Required fields are marked *

Scan the code