ರಾಜ್ಯಮಟ್ಟದ ಬಾಲಕಿಯರ ಬ್ಯಾಡ್ಮಿಂಟನ್ ನಲ್ಲಿ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಾಗಿದೆ.
(SHIVAMOGA): ಕನಕಪುರ ಜಿಲ್ಲೆಯ ರಾಮನಗರದ ಜೈನ್ ಕ್ರೀಡಾಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಪ್ರೌಢಶಾಲೆಗಳ 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಸಾಂದೀಪನಿ ಆಂಗ್ಲ ಶಾಲೆಯ 10ನೇ ತರಗತಿಯ ವಿಭಾ.ಜಿ.ಎಂ, 9ನೇ ತರಗತಿಯ ಅನ್ವಿತ.ಎಸ್.ಪಿ, ಪಾವನಿಸಿಂಗ್ ಈ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ವಿಭಾ.ಜಿ.ಎಂ ರಾಜ್ಯಮಟ್ಟದಲ್ಲಿ 3rd Ranking ಆಗಿದ್ದು ನವೆಂಬರ್ ನಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿರುತ್ತಾಳೆ.
ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ, ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.