ಭೀಕರ ಕಾಡಾನೆ ದಾಳಿಗೆ ರೈತ ಬಲಿ, ಅಧಿಕಾರಿಗಳ ನಿರ್ಲಕ್ಷವೇ ಕಾರಣ…!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ಹಿಂಬದಿ ಕುದುರೆಗುಂಡಿ ಸಮೀಪ ಕಾಡಾನೆ ದಾಳಿಗೆ ರೈತರು ಒಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಕಳೆದು ಒಂದು ವಾರದಿಂದ ಕಾಡಾನೆ ಗುಂಪೊಂದು ಸೀತೂರಿನಲ್ಲಿ ಸಂಚಾರ ಮಾಡುತ್ತಿದ್ದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು ಈಗ ಕೆರೆಗದ್ದೆ ನಿವಾಸಿ ಉಮೇಶ್ (55) ಕಾಡಾನೆ ದಾಳಿಯಿಂದ ಬಲಿಯಾಗಿರುವ ರೈತ.
ಕೊಪ್ಪ, ನರಸಿಂಹರಾಜಪುರ ಭಾಗಗಳಲ್ಲಿ ಯಾನೇ ಗುಂಪು ರೈತರ ಜಮೀನುಗಳು, ಭತ್ತದ ಗದ್ದೆಗಳು ಹಾಗೂ ಅಡಿಕೆ ಕಾಫಿ ತೋಟಗಳಿಗೆ ಆನೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದು ಇದೀಗ ಉಮೇಶ್ ಎನ್ನುವವರ ಮೇಲೆ ಸುಮಾರು 1.30ರ ಸಮಯಕ್ಕೆ ಏಕಾಏಕಿ ದಾಳಿ ಮಾಡಿ ಅವರನ್ನು ಕಾಡಾನೆ ಬಲಿ ಪಡೆದಿದೆ.
ಈ ಭಾಗದಲ್ಲಿರುವ ರೈತರಿಗೆ ಉಪಟಳ ನೀಡುತ್ತಿದ್ದು, ಸೀತೂರಿನ ಕೃಷ್ಣೆಗೌಡರ ತೋಟದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿದ್ದು ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.