Latestಇತರೆಮನರಂಜನೆ

“ಇದು ಆಧುನಿಕ ಕುಲಪುರಾಣ” ಕಣ್ಣಿಲ್ಲದವರು ಕಣ್ಣ ಧರಿಸಿ ಕಾಣಿರೋ……

“ಇದು ಆಧುನಿಕ ಕುಲಪುರಾಣ” ಕಣ್ಣಿಲ್ಲದವರು ಕಣ್ಣ ಧರಿಸಿ ಕಾಣಿರೋ……

ದಕ್ಲದೇವಿ ಕಥಾ ಕಾವ್ಯ
#Dakladevi_KathaKavya
“ಇದು ಆಧುನಿಕ ಕುಲಪುರಾಣ”
ಕಣ್ಣಿಲ್ಲದವರು ಕಣ್ಣ ಧರಿಸಿ ಕಾಣಿರೋ……

ದಕ್ಲರ ಬದುಕು, ಪದ್ಯ, ಬರಹಗಳು, ಹೇಳಿದ ಮಾತುಗಳು, ಇತರೆ ಲೇಖನಗಳನಿಟ್ಟುಕೊಂಡು ಒಂದು ಚಿಕ್ಕ ರಂಗ ಚೌಕಟ್ಟಿನಲ್ಲಿ ನೋಡುವಂತಹದ್ದಲ್ಲ! ಬಹುಶಃ ರಾಮಾಯಣ ಮಹಾಭಾರತ ಕಾವ್ಯಗಳನ್ನೂ ಕುಟ್ಟಿ ಪುಡಿ ಮಾಡಿ ರಂಗದ ಮೇಲೆ ಪ್ರದರ್ಶಿಸಬಹುದು.
ಆದರೆ ಈ “ದಕ್ಲಕಥಾ ದೇವಿ ಕಾವ್ಯ” ಜೀವನವನ್ನು, ಹೆಣ್ಣಿನ ನೋವುಗಳನ್ನು ಮತ್ತು ದಕ್ಲರ ಒಂದು ಹೊತ್ತಿನ ಕೂಳಿನ ಬದುಕನ್ನು, ರಂಗದ ಮೇಲೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ಮಾಡಿರುವ ಪ್ರಯೋಗ ಶ್ಲಾಘನೀಯ. ನಾಟಕದ ಪ್ರತಿಯೊಂದು ಘಟ್ಟವೂ ಮನುಷ್ಯನ ನಿಜ ಬದುಕನ್ನು ವಿಸ್ತರಿಸುತ್ತಾ ಅಸ್ಪೃಶ್ಯತೆ ಬರೀ ನೋವು ಅಷ್ಟೇ ಅಲ್ಲದೆ, ನಮ್ಮೊಳಗೆ ಹೊಸ ಅರಿವನ್ನು ಮೂಡಿಸುತ್ತದೆ. ದಕ್ಲದೇವಿ ಹೇಳುವ ಮಾತು, ಉಸಿರು ಲೋಕಕ್ಕೆಲ್ಲ ಒಂದೇ ಅಲ್ವಾ? ಎನ್ನುವ ಮಾತು ಸಮಾನತೆಯ ಪ್ರತಿಬಿಂಬವಾದರೆ, ದಕ್ಲನ ಎರಡು ಮಕ್ಕಳ ಹಸುವಿನ ಹಂಬಲ ಎಲ್ಲಾ ಮನುಷ್ಯರ ಮೂಲ ಮಂತ್ರ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಈಗ ಪ್ರಸ್ತುತ ವಿದ್ಯಮಾನಗಳಲ್ಲಿ ವೇದಶಾಸ್ತ್ರಗಳ ಮಂತ್ರಕ್ಕಿಂತಲೂ ನಮಗೆ ಹಸಿವು ಎನ್ನುವ ಮಂತ್ರವೇ ದೊಡ್ಡದು! ಪ್ರತಿಪುರುಷನು ತನ್ನ ಅಧಿಪತ್ಯದಲ್ಲಿ ಮೆರೆಯುವ ಮುಂಚೆ ಒಮ್ಮೆ ಅವನು ಹೆಣ್ಣಾಗಬೇಕು, ಆಗ ಹೆಣ್ಣು ಈ ಜಗದ ಕಣ್ಣು ಎನ್ನುವ ಅರಿವು ತನ್ನ ಭ್ರಮೆಯ ಬುದ್ಧಿಗೆ ಅಪ್ಪಳಿಸುತ್ತದೆ.


ಈ ಹಿಂದೆ ಊರ ಹೊರಗೆ ಅಲ್ಲಲ್ಲಿ ಕಣ್ಣಿಗೆ ಸ್ವಲ್ಪ ಸ್ವಲ್ಪ ಕಾಣಿಸಿಕೊಳ್ಳುವ ದಕ್ಲ ಸಮುದಾಯ, ಬಾಬಾಸಾಹೇಬರ ಆಶಯಗಳು ಹೊರಹೊಮ್ಮಿದ ಮೇಲೆ ಕೆಳವರ್ಗದ ಆಧುನಿಕ ಕುಲಪುರಾಣಗಳು ಮಹತ್ತರವಾಗಿ ಬೆಳಕಿಗೆ ಬಂದಿದೆ. ಈ ಬೆಳಕನ್ನು ಆಧಾರವಾಗಿಟ್ಟುಕೊಂಡು ದಕ್ಲರ ಬದುಕನ್ನು “ಕೆ.ಬಿ ಸಿದ್ದಯ್ಯ” ನವರು ಬಾಲ್ಯದ ಅನುಭವಗಳನ್ನು ತಮ್ಮ ಜೋಳಿಗೆಯಲ್ಲಿ ಶೇಖರಿಸಿಕೊಂಡಿದ್ದಾರೆ. “ದಕ್ಲಕಥಾ ದೇವಿ ಕಾವ್ಯ” ನಾಟಕದ ನಿರ್ದೇಶಕರು ಸರಿಯಾದ ಕ್ರಮದಲ್ಲಿ ಜೋಳಿಗೆ ಒಳಗಿರುವ ಅನುಭವ ಬದುಕನ್ನು ಪ್ರೇಕ್ಷಕರಿಗೆ ಹಂಚಿದ್ದಾರೆ. ಈ ರಂಗ ಪ್ರಯೋಗವನ್ನು “ಎಪಿಕ್” ರಂಗತಂತ್ರಗಳ ಜೊತೆಗೆ ಸಾಮಾನ್ಯವಾಗಿ ಕೇರಿ ಕೇರಿಗಳಿಗೆ ಹೋಗಿ ಪ್ರದರ್ಶನ ಮಾಡುವ ಹಾಗೆ ಸಿದ್ಧಪಡಿಸಿಕೊಂಡರೆ, ಸಂವಿಧಾನ ಚಾರಿತ್ರಿಕವಾಗಿ ಉಳಿದುಕೊಂಡಂತೆ, ಕೆ.ಬಿ ಸಿದ್ದಯ್ಯನವರ ಸೂಕ್ಷ್ಮ ವಿಚಾರಗಳು ಕೂಡ ಉಳಿದುಬಿಡುತ್ತದೆ.

ಕರ್ನಾಟಕದಲ್ಲಿರುವ ಪ್ರತಿ ರಂಗಶಾಲೆಗಳಿಗೆ Lakshman Kp ರವರು ಅಗತ್ಯವಾಗಿ ಬೇಕಾಗಿದ್ದಾರೆ.

ನಾಟಕದಲ್ಲಿನ ನಟರ ಪರಿಶ್ರಮಕ್ಕೆ ಸಲಾಂ Bindu, Raxidi, Santhoshdindgur, Dindgur, Bharath, Dingri, Rythemist
ಸಂಗೀತ ಸಾದ್ಯತಾ ಕಲೆ Poorvi Kalyani
ಬೆಳಕು Chandrashekara K

ದಿಲೀಪ್ ಕುಮಾರ್. ಆರ್
ಚಿಕ್ಕಬಳ್ಳಾಪುರ
(ರಂಗನಟ / ನಿರ್ದೇಶಕ)

Leave a Reply

Your email address will not be published. Required fields are marked *

Scan the code