ಜಿಲ್ಲೆನ್ಯೂಸ್

ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ರಕ್ಷಣೆ ಮಾಡುವಂತೆ ರೈತ ಸಂಘದಿಂದ ಜ.18 ರ ಸಂಜೆ 7 ಗಂಟೆಗೆ ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪಂಜಿನ ಹೋರಾಟ.

ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ರಕ್ಷಣೆ ಮಾಡುವಂತೆ ರೈತ ಸಂಘದಿಂದ ಜ.18 ರ ಸಂಜೆ 7 ಗಂಟೆಗೆ ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪಂಜಿನ ಹೋರಾಟ.


(KOLARA): ಬಂಗಾರಪೇಟೆ :ಗಡಿಭಾಗಗಳಲ್ಲಿ ರೈತರ ಬೆಳೆ ನಾಶಮಾಡುತ್ತಿರುವ ಆನೆಗಳನ್ನು ಹಿಡಿಯಲು ಆದೇಶ ಕೊಡಿ ಇಲ್ಲವೆ ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ರಕ್ಷಣೆ ಮಾಡುವಂತೆ ರೈತ ಸಂಘದಿoದ ಜ.18 ರ ಸಂಜೆ 7 ಗಂಟೆಗೆ ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪಂಜಿನ ಹೋರಾಟ ಮಾಡಲು ಗಡಿಭಾಗದ ಕದರಿನತ್ತ ಗ್ರಾಮದ ನೊಂದ ರೈತರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.

ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ರೈತರ ಬೆಳೆ ಪ್ರಾಣ ಹಾನಿಯನ್ನು ರಕ್ಷಣೆ ಮಾಡಿ ಇಲ್ಲವೇ ರೈತರಿಗೆ ಆನೆ ಹಿಡಿಯಲು ತರಬೇತಿ ಕೇಂದ್ರ ಪ್ರಾರಂಭ ಮಾಡಿ ಉಚಿತ ಗ್ಯಾರಂಟಿಯಲ್ಲಿ ಪ್ರತಿ ಮನೆ ಮನೆಗೂ ಆನೆಗಳನ್ನು ಸಾಕಾಣಿಕೆ ಮಾಡಲು ಅನುಮತಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ನೊಂದ ರೈತ ಕದರಿನತ್ತ ಅಪ್ಪೋಜಿರಾವ್ ಅರಣ್ಯ ಸಚಿವರನ್ನು ಸಭೆಯಲ್ಲಿ ಒತ್ತಾಯ ಮಾಡಿದರು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರಿಗೆ ಒಂದು ತಿಂಗಳಿoದ ನಿರಂತರವಾಗಿ ಖಾಸಗಿ ಸಾಲ ಮಾಡಿ ಬೆಳೆದಿರುವ ರಾಗಿ ಭತ್ತ ಮತ್ತಿತರ ವಾಣಿಜ್ಯ ಬೆಳೆಗಳನ್ನು ಕಾಡಾನೆಗಳು ನಾಶ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಪಲವಾಗಿದ್ದಾರೆಂದು ಗಡಿಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಳ್ಳರು ಬಂದು ಊರು ದೋಚಿದ ಮೇಲೆ ಊರ ಬಾಗಿಲು ಹಾಕಿದರೂ ಎಂಬ ಗಾದೆಯಂತೆ ಕಾಡಾನೆಗಳಿಂದ ರೈತರ ಬೆವರು ಸುರಿಸಿ ಬೆಳೆದ ಬೆಳೆ ನಾಶವಾದ ನಂತರ ಪತ್ತೆಯಾಗುವ ಅರಣ್ಯ ಅಧಿಕಾರಿಗಳ ರೈತ ವಿರೋಧಿ ದೋರಣೆ ಹಾಗೂ ಗಡಿಭಾಗದ ರೈತರ ಪಾಲಿಗೆ ಯಮಕಿಂಕರಾಗಿರುವ ಜನ ಪ್ರತಿನಿಧಿಗಳ ವಿರುದ್ದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗಗಳ ಹೆಸರಿನಲ್ಲಿ ಸರ್ಕಾರಗಳು ರೈತರ ಜೀವನದ ಜೊತೆ ಚಲ್ಲಾಟವಾಡಿದರೆ ಮತ್ತೊಂದಡೆ ಕಷ್ಟಾಪಟ್ಟು ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ಸಂಪೂರ್ಣವಾಗಿ ನಾಶ ಮಾಡುತ್ತಿದ್ದು, ಬೆಳೆಯನ್ನು ರಕ್ಷಣೆ ಮಾಡದೆ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಡಿಭಾಗದ ರೈತರ ಕಾಡಾನೆಗಳ ಹಾವಳಿಗೆ ಶಾಶ್ವತ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಗಡಿಭಾಗದ ರೈತರ ಪಾಲಿಗೆ ಕ್ಷೇತ್ರದ ಜನ ಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆ. ಕಾಡಾನೆಗಳ ಹಾಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ಒಂದು ಕಡೆ ಬೆಳೆಯು ಇಲ್ಲ ಮತ್ತೊಂದು ಕಡೆ ಪರಿಹಾರವು ಇಲ್ಲದೆ ಜಾತಕ ಪಕ್ಷಿಗಳಂತೆ ರೈತರು ಕಣ್ಣೀರು ಸುರಿಸುತ್ತಿದ್ದರೂ, ಮನ ಕರಗದ ಅಧಿಕಾರಿಗಳ ಜನ ಪ್ರತಿನಿಧಿಗಳ ರೈತ ವಿರೋಧಿ ದೋರಣೆಗೆ ಆಕ್ರೋಷ ವ್ಯಕ್ತಪಡಿಸಿದರು.

24 ಗಂಟೆಯಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡಿ ಇಲ್ಲವೆ ಆನೆ ಹಿಡಿಯಲು ಆದೇಶವನ್ನಾದರೂ ಕೊಡಿ ಎಂದು ಜ.18 ರ ಗುರುವಾರ ಸಂಜೆ 7 ಗಂಟೆಗೆ ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪಂಜಿನ ಮೆರವಣಿಗೆ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಜಾವೀದ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗೀರಿಶ್, ಮುನಿರಾಜು, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣಯ್ಯ, ಪಾರಂಡಹಳ್ಳಿ ಮಂಜುನಾಥ, ಬಾಬಾಜಾನ್, ಸುರೇಶ್‌ಬಾಬು, ವೇಣುಗೋಪಾಲ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್. ಮುಂತಾದವರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code