ನ್ಯೂಸ್ಶಿವಮೊಗ್ಗ

ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಸಾಧನೆಗೈದಿರುವವರಲ್ಲಿ ತಾಲ್ಲೂಕಿನ ಇಬ್ಬರು.

ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಸಾಧನೆಗೈದಿರುವವರಲ್ಲಿ ತಾಲ್ಲೂಕಿನ ಇಬ್ಬರು.

(SHIVAMOGA): ಸೊರಬ: ಪ್ರಸಕ್ತ ಸಾಲಿನ ಪಿಯೂ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಸಾಧನೆಗೈದಿರುವವರಲ್ಲಿ ತಾಲ್ಲೂಕಿನ ಇಬ್ಬರು ಗಮನಾರ್ಹರು.

ಇಲ್ಲಿನ ಸರ್ಕಾರಿ ಪಿಯೂ ಕಾಲೇಜು ವಾಣಿಜ್ಯ ಕಾಮರ್ಸ ವಿಭಾಗದ ವಿದ್ಯಾರ್ಥಿ ಕುಬೇರಗೌಡ ಪಾಟಿಲ್ 600 ಕ್ಕೆ565 ಅಂಕ ಪಡೆದು ಶೇ. 94.16 ರ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ. ಈತ ರೋಣ ತಾಲ್ಲೂಕಿನ ಅಮರಗೋಳದವನು. ಸೊರಬದ ಸಂಬಂದಿ ನಿವೃತ್ತ ಶಿಕ್ಷಕ ವ್ಹಿ.ಬಿ.ಜಾವೂರ್ ಮನೆಯಲ್ಲಿದ್ದು ಓದಿಕೊಂಡವ, ಬಡ ಕುಟುಂಬದಿಂದ ಬಂದ ಈತನಿಗೆ ತಂದೆ ಇಲ್ಲ. ಅವರ ಅಜ್ಜಿ ಓದಲು ಹಣ ಕೊಡುತ್ತಿದ್ದು ಅಜ್ಜಿಯ ಹಣವನ್ನು ಸದ್ವಿನಿಯೋಗ ಮಾಡಿಕೊಂಡಿದ್ದಾನೆ.
ಸಭ್ಯತೆಯನ್ನು ಮೈಗೂಡಿಸಿಕೊಂಡ ಈತ ಕಾಲೇಜಿನ ಎಲ್ಲಾ ಉಪನ್ಯಾಸಕ ರ ಮೆಚ್ಚಿನ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ.

ಇನ್ನೋರ್ವ ವಿದ್ಯಾರ್ಥಿನಿ ಧನ್ಯ ಕಡಸೂರು ಗ್ರಾಮದವರಾಗಿದ್ದು, ತಾಯಿ ನೇತ್ರಾವತಿ ಪ್ರೌಢಶಾಲೆ ಅಡುಗೆ ಕಾರ್ಯಕರ್ತೆ, ತಂದೆ ಶ್ರೀಧರಾಚಾರ್ಯ ಸಣ್ಣಪುಟ್ಟ ಕಬ್ಬಿಣಕೆಲಸ, ಮರಗೆಲಸ ಇತ್ಯಾದಿ ಮಾಡಿ ಜೀವನ ಸಾಗಿಸುತ್ತಿದ್ದು ಮಕ್ಕಳ ಶಿಕ್ಷಣ ವಿಷಯದಲ್ಲಿ ಅತಿ ಹೆಚ್ಚು ಕಾಳಜಿ ವಹಿಸಿರುವ ಪರಿಣಾಮ ಮಗಳು ಧನ್ಯ ಸಿದ್ದಾಪುರ ಸರ್ಕಾರಿ ಪಿಯೂ ಕಾಲೇಜಿನಲ್ಲಿ ವಿಜ್ಞಾನ ಓದಿ ೫೪೧ ಅಂಕ ಪಡೆದಿದ್ದಾಳೆ. ಬಡತನದ ನಡುವೆಯೆ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇವರು ದೇಶದ ಆಸ್ತಿ ಇವರ ಸಾಧನೆಗೆ ಸಮಾಜ, ಸರ್ಕಾರ ಬೆನ್ನುತಟ್ಟಿ ಪ್ರೋತ್ಸಾಹಿಸುವುದರ ಮೂಲಕ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಿರುವ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code