ಪಟ್ಟಣದ ದರ್ಗಾ ಮೈದಾನದಲ್ಲಿ ನಾಳೆಯಿಂದ ಉರುಸು ಪ್ರಾರಂಭ
(KOLARA): ಬಂಗಾರಪೇಟೆ: ಪಟ್ಟಣದಲ್ಲಿ ಹಜರತ್ ಶಂಶುದ್ದೀನ್ ಹವಾಲಿಯ ಟ್ರಸ್ಟ್ ನೇತೃತ್ವದಲ್ಲಿ ಇದೇ 8 ರಿಂದ 10 ರವರೆಗೆ ಉರುಸು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಂಶುದ್ದೀನ್ ಬಾಬು ತಿಳಿಸಿದರು.
ಪಟ್ಟಣದ ಟ್ರಸ್ಟ್ ಕಚೇರಿಯಲ್ಲಿ ಸಂಜೆ 6:00ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 8ರಂದು ದರ್ಗಾ ಮೈದಾನದಲ್ಲಿ 90ನೇ ವರ್ಷದ ಉರುಸು, 9 ಮತ್ತು 10ರಂದು ಕವಾಲಿ ನಡೆಯಲಿದೆ. ಉರುಸುನಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಗುಲ್ಜಾರ್, ಕಾರ್ಯದರ್ಶಿ ಖಲೀಲ್ ರೆಹಮಾನ್, ಖಜಾಂಚಿ ಆದಿಲ್ ಪಾಶ , ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ