ವೇಮಗಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿ. ಎಂ. ನಾಗರಾಜ್ ರವರನ್ನು ನೂತನವಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ನೇಮಕ
(KOLARA): ಕೋಲಾರ : ತಾಲೂಕಿನ ವೇಮಗಲ್ – ಕುರುಗಲ್ ಪಟ್ಟಣ ಪಂಚಾಯಿತಿಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಎಸ್.ಡಿ.ಎಂ.ಸಿ ರಚನೆಯನ್ನು ಗುರುವಾರ ಶಾಲೆಯ ಆವರಣದಲ್ಲಿ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಪೋಷಕರು ಪಾಲ್ಗೊಂಡಿದ್ದರು, ನಂತರ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರನ್ನಾಗಿ ವಿ. ಎಂ. ನಾಗರಾಜ್ ಹಾಗೂ ಉಪಾಧ್ಯಕ್ಷರನ್ನಾಗಿ ಶ್ರೀಮತಿ ನೇತ್ರಾವತಿ ರವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಯಿತು.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ವಿ. ಎಂ. ನಾಗರಾಜ್ ರವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಈಗ ನನ್ನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ಶಾಲೆಯ ಋಣ ನನ್ನ ಮೇಲೆ ತುಂಬಾ ಇದೇ ಆದ್ದರಿಂದ ನಾನು ನೀವು ನೀಡಿರುವ ಈ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಕಾಯ ವಾಚ ಮನಸಾ ನನ್ನ ಕೈಲಾದಷ್ಟು ಶಾಲೆಯ ಅಭಿವೃದ್ಧಿಗೆ ದುಡಿಯುತ್ತೇನೆ, ಹಾಗೂ ಕೆಲವರ ದಾನಿಗಳ ಸಹಾಯದಿಂದ ಹಾಗೂ ವೇಮಗಲ್ ಪಟ್ಟಣದಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶ ಬೆಳೆದು ನಿಂತಿದೆ ಆದ್ದರಿಂದ ಕಂಪನಿಗಳ ಎಚ್.ಆರ್ ಗಳನ್ನು ಮನಹೊಳಿಸಿ ಸಿ.ಎಸ್.ಆರ್ ಪಂಡ್ ಗಳನ್ನು ಉಪಯೋಗಿಸಿಕೊಂಡು ಮತ್ತಷ್ಟು ಈ ಶಾಲೆಯನ್ನು ಅಭಿವೃದ್ಧಿ ಪಡಿಸಲು ನಿಮ್ಮೆಲ್ಲರ ಸಹಕಾರದಿಂದ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ನೂತನ ಎಸ್.ಡಿ. ಎಂ. ಸಿ ಅಧ್ಯಕ್ಷರಾದ ವಿ. ಎಂ. ನಾಗರಾಜ್ ಉಪಾಧ್ಯಕ್ಷರಾದ ಶ್ರೀ ಮತಿ ನೇತ್ರಾವತಿ ಸದಸ್ಯರಾದ ಮುನಿರಾಜು, ನಾಯಜ್, ತುೌಸಿಫ್ ಖಾನ್, ಮಲ್ಲಮ್ಮ, ಕವಿತ, ಮಹಾಲಕ್ಷ್ಮಿ, ಶ್ವೇತಾ, ಹಾಗೂ ಶಾಲೆಯ ಉಪ ಪ್ರಾಂಶುಪಾಲರಾದ ಸುಮಾ ಶಿಕ್ಷಕರಾದ ಆನಂದ್, ರಮೇಶ್, ಭಾರತಿ, ಮುನಿರಾಜ್ ಸುರೇಶ್, ಭಾಗ್ಯಲಕ್ಷಿ, ತೇಜ್ ಬ್ಯಾನರ್ಜಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ