ನ್ಯೂಸ್ಶಿವಮೊಗ್ಗ

ತಮ್ಮ ಬೆಂಬಲಿಗರ ಜೊತೆ ಸೇರಿ ಮತ ಚಲಾಯಿಸಿದ ವಿ ಜಿ ಪರಶುರಾಮ್

ತಮ್ಮ ಬೆಂಬಲಿಗರ ಜೊತೆ ಸೇರಿ ಮತ ಚಲಾಯಿಸಿದ ವಿ ಜಿ ಪರಶುರಾಮ್

(SHIVAMOGA): ಸೊರಬ: ಬಿಜೆಪಿ ಮುಖಂಡ ವಿ.ಜಿ ಪರಶುರಾಮ್ ಬಿಳವಗೋಡು ಅವರು ಸೊರಬ ತಾಲೂಕಿನ ತವನಂದಿಯ ಮತಗಟ್ಟೆ ಸಂಖ್ಯೆ 114 ರಲ್ಲಿ ತಮ್ಮ ಬೆಂಬಲಿಗರೊ0ದಿಗೆ ಮತ ಚಲಾಯಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ದೇಶ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ತುಂಬಾ ಅವಶ್ಯಕವಾಗಿದೆ. ನನ್ನೊಬ್ಬನ ಮತದಾನದಿಂದ ಏನಾಗುತ್ತದೆ ಎಂಬ ಅಸಡ್ಡೆ ಯಾರಲ್ಲೂ ಬರಬಾರದು. ದೇಶದ ಭವಿಷ್ಯ ನಿರ್ಮಾಣವಾಗುವುದೇ ಪ್ರತಿಯೊಬ್ಬರ ಮತದಾನದಿಂದ ಮಾತ್ರ. ಮತದಾನ ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ಯಾರೊಬ್ಬರು ಯಾವುದೇ ಚುನಾವಣೆಯಲ್ಲಿಯೂ ಮತದಾನದಿಂದ ಹೊರಗುಳಿಯದೇ ಮತ ಚಲಾಯಿಸಿ, ನಮ್ಮ ಜವಾಬ್ದಾರಿ ನಿಬಾಯಿಸಬೇಕು ಎಂದರು.

ವರದಿ: ಸಂದೀಪ್ ಯು ಎಲ್ ಸೊರಬ

Leave a Reply

Your email address will not be published. Required fields are marked *

Scan the code