ಕಾಡು ಉಳಿಸುವುದು ಗೊತ್ತು, ಕಾಡು ಬೆಳೆಸುವುದು ಗೊತ್ತು, ದೇಶಕ್ಕೆ ಅನ್ನ ಕೊಡೋ ರೈತರು ನಾವು.
(SHIVAMOGA): ಸಾಗರ ತಾಲೂಕಿನ ಮಾಸೂರು ಗ್ರಾಮದ ಮೆಳವರಿಗೆಯಲ್ಲಿ ಶ್ರೀ ಮಾರಿಕಾಂಬದೇವಿಯ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತಿದ್ದು, ದೇವಸ್ಥಾನದ ಸುತ್ತಮುತ್ತಲೂ ಸಮತಟ್ಟು ಮಾಡಲು ಇದೇ ಗ್ರಾಮದ ಗೋಮಾಳು ಜಾಗದಲ್ಲಿ ಮಣ್ಣು ತೆಗೆಯುವ ಸಮಯದಲ್ಲಿ ಕಂದಾಯ ಮತ್ತು ಪೋಲಿಸ್ ಇಲಾಖೆಯವರು ಮಣ್ಣುತೆಗೆಯುವುದನ್ನು ನಿಲ್ಲಿಸಲು ಮುಂದಾಗಿ ಮೇಲಿನಿಂದ ಒತ್ತಡಗಳು ಇರುವುದಾಗಿ ತಿಳಿಸುತ್ತಾರೆ.
ಈ ಸಮಯದಲ್ಲಿ ಯಾವುದೋ ಒತ್ತಡಕ್ಕೆ ಬಿದ್ದು ಬಡರೈತರ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ ಎಂದು ತಾಲೂಕು ಆಡಲಿತದ ವಿರುದ್ಧ ಹರಿಹಾಯ್ದ ಮಾಜಿ ಗ್ರಾಮಪಂಚಾಯ್ತಿ ಅದ್ಯಕ್ಷ ಚೌಡಪ್ಪ ಮೆಳವರಿಗೆ, ಸಾಗರ ತಾಲೂಕಿನಲ್ಲಿ ಮೆಳವರಿಗೆ ಗ್ರಾಮಸ್ಥರು ಬದುಕುವುದೇ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಈ ಸಮಯದಲ್ಲಿ ಗ್ರಾಮ ಸುಧಾರಣಾ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ